Author Details

AR

Akarsha Ramesh Kamala

Akarsha Ramesh Kamala ಆಕರ್ಷ ರಮೇಶ್ ಕಮಲ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ತಂದೆ ಎಸ್. ರಮೇಶ್ ವಕೀಲರು. ತಾಯಿ - ಎಂ.ಆರ್. ಕಮಲ ಕನ್ನಡದ ಪ್ರಸಿದ್ದ ಕವಯತ್ರಿ, ಲೇಖಕಿ. ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮಾಡಿ ಕೆಲಕಾಲ ಅಮೆರಿಕಾ, ಸ್ವಿಟ್ಸರ್ಲ್ಯಾಂಡ್, ಮತ್ತು ಫ್ರಾನ್ಸ್, ದೇಶಗಳಲ್ಲಿ ನೆಲೆಸಿದ್ದರು. ವೃತ್ತಿಯಲ್ಲಿ ಬೆಂಗಳೂರಿನ ಖಾಸಗೀ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಹಲವಾರು ಆಸಕ್ತಿಗಳತ್ತ ಮುಖ ಮಾಡಿರುವ ಆಕರ್ಷ ಪ್ರೆಸೆಂಟ್ ಸರ್, ಮರೀಚಿ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿ ಸಿನೆಮಾ ರಂಗಕ್ಕೆ ಪ್ರವೇಶಿಸಿದ್ದಾರೆ. ಇವರ ಈ ಕಿರುಚಿತ್ರಗಳು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡಿವೆ. ಸ್ವತಃ ನಿರ್ದೇಶನವಲ್ಲದೇ ಕೆಂಪಿರ್ವೆ, ಬೀರಬಲ್ ಟ್ರೆಲಜಿ, ಉನರ್ ವು, ಮತ್ತು ಹೆಸರಾಂತ ಕಿರುತೆರೆ ಧಾರವಾಹಿ ನಿರ್ದೇಶಕರಾದ ಟಿ.ಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವು ಚಿತ್ರಗಳಿಗೆ , ಕಿರುಚಿತ್ರಗಳಿಗೆ ಅಡಿನುಡಿ (subtitle) ಬರೆದಿದ್ದಾರೆ. ಆಕರ್ಷರವರ ಮತ್ತೊಂದು ಆಕರ್ಷಣೀಯ ಆಸಕ್ತಿಯ ಕ್ಷೇತ್ರ ಕಾವ್ಯ ಪ್ರಪಂಚ. ಅನೇಕ ಕವನಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ಕೆಲವು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕವನ ವಾಚನ ಮಾಡುವ ಮ...
View Books

Top Books

HomeShop
Podcast
My Books
Cart