Author Details

AT

Anantaramu TR

ತಾಳಗುಂದ ರಾಮಣ್ಣ ಅನಂತರಾಮು (ಟಿ. ಆರ್. ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಜನಪ್ರಿಯ ಅಂಕಣಕಾರ, ವಿಜ್ಞಾನ ಲೇಖಕ ಮತ್ತು ಸಂಪಾದಕ. ಇವರು ಅನೇಕ ಪತ್ರಿಕೆಗಳಲ್ಲಿ, ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ಹಲವು ದಶಕಗಳಿಂದ ತೊಡಗಿದ್ದಾರೆ. ಭೂವಿಜ್ಞಾನದಂತಹ ವಿಷಯದಲ್ಲಿಯ ಸಂಗತಿಗಳನ್ನು ಜನಸಾಮಾನ್ಯರಿಗೂ ಮನಮುಟ್ಟುವಂತೆ ತಲುಪಿಸಿ ಅವರಲ್ಲಿ ಆಸಕ್ತಿಯನ್ನುಂಟು ಮಾಡಿದ ಕನ್ನಡ-ವಿಜ್ಞಾನ ಲೇಖಕರಾಗಿದ್ದಾರೆ. ಅವರು ವಿಜ್ಞಾನ ಪ್ರಸಾರ, ಗ್ರಂಥ ರಚನೆ ಹಾಗೂ ಗ್ರಂಥ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 'ವಿಸ್ಮಯ ವಿಜ್ಞಾನ ಮಾಲಿಕೆ,' ಯಲ್ಲಿ ಕೃತಿಗಳ ಸಂಪಾದನೆ, ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ, 'ಕನ್ನಡ ವಿಶ್ವಕೋಶ', 'ಜ್ಞಾನ-ವಿಜ್ಞಾನಕೋಶ', 'ಕಿರಿಯರ ಕರ್ನಾಟಕ', 'ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ' ಮುಂತಾದ, 'ಪರಾಮರ್ಶನ ಗ್ರಂಥ' ಗಳಿಗೆ ಅವರು ಬರೆದಿರುವ ಲೇಖನ ಮುಂತಾದವುಗಳು ಅನಂತರಾಮುರವರನ್ನು ಕನ್ನಡ ವಿಜ್ಞಾನ ಸಾಹಿತ್ಯದ ಒಬ್ಬ ವಿಶಿಷ್ಠ ವ್ಯಕ್ತಿಯನ್ನಾಗಿಸಿವೆ. ನವಕರ್ನಾಟಕ ಪ್ರಕಟನಾ ಸಂಸ್ಥೆಯ 'ಪದ ವಿವರಣಾ ಕೋಶ’ ಮತ್ತು ’ಜ್ಞಾನ -ವಿಜ್ಞಾನ ಕೋಶ’ಗಳಲ್ಲಿ ಸಹಾಯಕ ಸಂಪಾದಕರಾಗಿ ಮಾಡಿದ ಕೆಲಸ ಮಹತ್ವದ್ದೆಂದು ಗುರುತಿಸಲ್ಪಟ್ಟಿದೆ.
View Books

Top Books

HomeShop
Podcast
My Books
Cart