Author Details

AA

Anush A Shetty

ಅನುಷ್ ಎ ಶೆಟ್ಟಿ ಅನುಷ್ ಎ. ಶೆಟ್ಟಿ ಮಂಗಳೂರಿನಲ್ಲಿ ಜನಿಸಿ, ಹುಣಸೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದ ಅವರು ಕನ್ನಡಪ್ರಭ, ಸಾಧ್ವಿ ದಿನಪತ್ರಿಕೆಗಳು ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತಿರುವ ಅವರು ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ಸ್ನೇಹಿತರೊಂದಿಗೆ ಆರಂಭಿಸಿದ ‘ನಾವು’ ಬ್ಯಾಂಡ್ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ರಂಗಸಂಗೀತದಲ್ಲಿ ತೊಡಗಿ ದೇಶಾದ್ಯಂತ ಪ್ರವಾಸ ಮಾಡುತ್ತಿರುವ ಅವರು, ಗೆಳೆಯ ಶ್ರೀವತ್ಸನೊಂದಿಗೆ ‘ಇವೆಂಟೊ’ ಎಂಬ ಇವೆಂಟ್ ಕಂಪನಿ ಮತ್ತು ‘ಅನುಗ್ರಹ ಪ್ರಕಾಶನ’ವನ್ನು ಮುನ್ನಡೆಸುತ್ತಿದ್ದಾರೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಕ್ಷೇತ್ರಕ್ಕೆ ಬಂದ ಅನುಷ್ ಅವರ ಬರಹಗಳ ಕೇಂದ್ರವಸ್ತು ಪ್ರಕೃತಿಯೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರಿಸುತ್ತಾ, ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಅವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಆಹುತಿ, ಕಳ್ಬೆಟ್ಟದ ದರೋಡೆಕೋರರು, ಜೋಡ್ಪಾಲ ಮತ್ತು ನೀನು ನಿನ್ನೊಳಗೆ ಖೈದಿ ಇವರ ಪ್ರಕಟಿತ ಕಾದಂಬರಿಗಳಾಗಿದ್ದು, ಇವುಗಳಲ್ಲಿ ಆಹುತಿ ಇವರ ಎರಡನೇ ಕೃತಿ.
View Books

Top Books

HomeShop
Podcast
My Books
Cart