Author Details
AC
Aravind Chokkadi
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ.
ಅರವಿಂದ ಚೊಕ್ಕಾಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಲೇಖಕ, ಅಂಕಣಕಾರ ಹಾಗೂ ಶಿಕ್ಷಕರಾಗಿದ್ದು, ಶಿಕ್ಷಣ, ಸಮಾಜ ಮತ್ತು ತತ್ವಶಾಸ್ತ್ರ ಕುರಿತಂತೆ ಅನೇಕ ವೈಚಾರಿಕ ಕೃತಿಗಳನ್ನು ರಚಿಸಿದ್ದಾರೆ. ಸಾಮಾಜಿಕ ಕಾಳಜಿ ಮತ್ತು ಚಿಂತನೆ ಅವರ ಬರಹಗಳ ವೈಶಿಷ್ಟ್ಯವಾಗಿದ್ದು, ಅರ್ಥಶೋಧ, ಅನ್ವಯ, ಮಧ್ಯಮ ಪಥ, ಬದುಕಿಗಾಗಿ ಶಿಕ್ಷಣ, ಯುವ ಮನಸ್ಸಿನ ಮೆಟ್ಟಿಲುಕಲಿಕೆಯ ನಡೆ, ಸಿಕ್ಕದು, ಸುಧಾರಕರು, ಮಹಾಭಾರತದ ಮಹಾ ಪಾತ್ರಗಳು ಸೇರಿದಂತೆ ಹಲವು ಕೃತಿಗಳನ್ನು ನೀಡಿದ್ದಾರೆ. ಬದುಕಿಗಾಗಿ ಶಿಕ್ಷಣ ಕೃತಿಗೆ ಅರಳು ಪ್ರಶಸ್ತಿ, ಇಲ್ಲದ ತೀರದಲ್ಲಿ ಕೃತಿಗೆ 2009ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಹಲವು ಗೌರವಗಳು ದೊರೆತಿವೆ. ಬಳ್ಳಾರಿಯ ಡಾ. ಸುಭಾಸ್ ಭರಣಿ ಸಾಂಸ್ಕೃತಿಕ ವೇದಿಕೆಯ “ಉತ್ತಮ ಶಿಕ್ಷಕ ಪ್ರಶಸ್ತಿ” ಹಾಗೂ ಶಿಕ್ಷಕರ ಪ್ರತಿಭಾ ಪರಿಷತ್ತಿನ “ಶಿಕ್ಷಣ ಸಾಹಿತ್ಯ ರತ್ನ ಪ್ರಶಸ್ತಿ” ಅವರು ಪಡೆದ ಇತರ ಗೌರವಗಳಲ್ಲಿ ಸೇರಿವೆ. ಅವರ ಬರಹಗಳು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಸ್ಸಿ. ಮತ್ತು ಬಿ.ಕಾಂ. ಪಠ್ಯಕ್ರಮಗಳಲ್ಲೂ ಸೇರಿವೆ.
View Books