Author Details
A
Arya
ಆರ್ಯ ಅಥವಾ ಪಿ.ಆರ್. ಆಚಾರ್ಯರು ಧಾರವಾಡದಲ್ಲಿ ನೆಲೆಸಿರುವ ಬಹುಮುಖ ಪ್ರತಿಭೆಯ ಲೇಖಕರು. 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ಕಾವ್ಯದಲ್ಲಿ ಮನುಷ್ಯ, ನಾಟಕಗಳಲ್ಲಿ ಯಜ್ಞ, ಪಾತಾಳ ಗರುಡಿ, ಬಯಲು ಆಲಯದೊಳಗೊ, ಭ್ರೂಣ, ಮಳೆ ಬಂತು, ಬೇಟೆ, ಅವಿಮಾರಕಮ್ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕಥಾಸಂಕಲನಗಳಲ್ಲಿ ದೇಸಿ ಪರದೇಸಿ ಕತೆಗಳು, ದೃಷ್ಟ, ಕೊಕ್ಕರೆ ತಾತ, ಕಾದಂಬರಿಯಲ್ಲಿ ಗುರು ಹಾಗೂ ಅನುವಾದವಾಗಿ ಮಿಖಾಯೆಲ್ ಗೊಟ್ಲೊಬ್ ಅವರ ದಕ್ಷಿಣ ಏಶ್ಯಾದಲ್ಲಿ ಇತಿಹಾಸ ಚಿಂತನೆ ಕೃತಿಯನ್ನು ಕನ್ನಡಕ್ಕಿತ್ತಿದ್ದಾರೆ.
View Books


