Author Details
BV
B V Bharathi
B V Bharathi
ಭಾರತಿ ಬಿ.ವಿ. ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಜನಿಸಿ, ಬಿ.ಕಾಂ ಪದವೀಧರೆಯಾಗಿದ್ದಾರೆ. ಕವಿತೆ ರಚನೆ, ಅನುವಾದ ಮತ್ತು ಪ್ರವಾಸ ಇವರ ಹವ್ಯಾಸಗಳಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ‘ಸಾಸಿವೆ ತಂದವಳು’, ‘ಮಿಸಳ್ ಭಾಜಿ’, ‘ಕಿಚನ್ ಕವಿತೆಗಳು’, ‘ಜಸ್ಟ್ ಮಾತ್ ಮಾತಲ್ಲಿ’, ‘ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ’, ‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ’, ಹಾಗೂ ‘ಎಲ್ಲಿಂದಲೋ ಬಂದವರು’ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ‘ಸಾಸಿವೆ ತಂದವಳು’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ. ಇಂದಿರಾ ಪ್ರಶಸ್ತಿ ಮತ್ತು ‘ಮಿಸಾಳ್ ಬಾಜಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.
View Books