Author Details
BJ
B Janardhan Bhat
B Janardhan Bhat
ಕನ್ನಡಕ್ಕೆ ಅನನ್ಯ ಕಾದಂಬರಿಗಳನ್ನು ನೀಡುತ್ತಿರುವ ಬಿ. ಜನಾರ್ದನ ಭಟ್ ಅವರ ಏಳನೆಯ ಕೃತಿ ‘ಗಮ್ಯ’. ಮನುಷ್ಯನ ಸಹಜ ಜೀವನಪ್ರೀತಿಯನ್ನು ಸುಂದರವಾಗಿ ಪ್ರತಿಬಿಂಬಿಸುವ ಈ ಕಾದಂಬರಿಯಲ್ಲಿ, ಮಲಯಾಳಂ, ಕನ್ನಡ ಮತ್ತು ತುಳು ಸಂಸ್ಕೃತಿಗಳ ವಿಭಿನ್ನ ಆಯಾಮಗಳನ್ನು ಹೊಂದಿದ ಪಾತ್ರಗಳು ಓದುಗರ ಮನಸ್ಸನ್ನು ಸೆಳೆಯುತ್ತವೆ. ಹಳ್ಳಿಯಲ್ಲಿ ಅಧ್ಯಾಪಕರಾಗಿರುವ ಪ್ರತಿಭಾವಂತ ಹಾಗೂ ಸುಂದರ ತರುಣ ರಾಜೇಶ್, ಆಧುನಿಕ ಬದುಕನ್ನು ಇಷ್ಟಪಡುವ ರಾಗಿಣಿ, ಸಾಂಪ್ರದಾಯಿಕ ಚೌಕಟ್ಟಿನಲ್ಲಿದ್ದರೂ ಕಥೆಗೆ ಮಧುರ ಅಂತ್ಯ ನೀಡುವ ಕಲ್ಯಾಣಿ – ಈ ಮೂರು ಪ್ರಧಾನ ಪಾತ್ರಗಳು ಕಾದಂಬರಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಕಾಲದೊಂದಿಗೆ ಬದಲಾಗುವ ಸಮಾಜವನ್ನು ಹೊಸ ರೀತಿಯಲ್ಲಿ ಪರಿಚಯಿಸುತ್ತವೆ. ದಿನನಿತ್ಯದ ಬದುಕು, ಜಿಜ್ಞಾಸೆಯ ಮೂಲಕ ಆಧುನಿಕತೆಯ ಹೊಸ ಸ್ವರೂಪ ತಾಳುತ್ತದೆ. ವರ್ತಮಾನದಿಂದ ಆಚೆಗೆ ನೋಡುವ ಮನುಷ್ಯನ ಸಹಜ ಪ್ರೀತಿ ಮತ್ತು ದೌರ್ಬಲ್ಯ ಎರಡೂ ಇಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿವೆ.
ಪ್ರೀತಿ, ಅಸಹನೆ, ಹೃದಯವಂತಿಕೆ, ಸಣ್ಣತನ, ಕಾಲದ ಕುಟಿಲತೆ ತರುವ ವೈಪರೀತ್ಯಗಳು, ಸಾಮಾಜಿಕ ಅನ್ಯಾಯಗಳ ಹಲವಾರು ಮುಖಗಳು – ಇವೆಲ್ಲವನ್ನು ನಾಯಕ ರಾಜೇಶ್ ಎದುರಿಸುತ್ತಾನೆ. ಪ್ರೀತಿ, ಪ್ರೇಮ, ವಿಷಾದ, ಈರ್ಷೆ, ವಂಚನೆ – ಇವುಗಳ ಮಧ್ಯೆ ಬದುಕುವ ಜನರ ಕಥೆಗಳಿವೆ. ಸುಳ್ಳನ್ನು ಬದುಕಿನ ಭಾಗವನ್ನೇ ಮಾಡಿಕೊಂಡಿರುವ ಮಣಿಕಾಂತ, ನಾಟಕ ರಂಗದ ಜಗ್ಗಿ, ಕ್ಯಾಂಟೀನ್ ನಡೆಸುವ ಅಚ್ಯುತನ್...
View Books



