Author Details
BS
Basavaraj Sabarad
ಡಾ. ಬಸವರಾಜ ಸಬರದ
ಬಸವರಾಜ ಸಬರದವರು 1954ರ ಜೂನ್ 20ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ಕುಕನೂರಿನಲ್ಲಿ ಬಸಪ್ಪ ಸಬರದ ಮತ್ತು ಬಸಮ್ಮ ದಂಪತಿಗಳಿಗೆ ಜನಿಸಿದರು. ಕುಕನೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್ಡಿ ಪದವಿಗಳನ್ನು ಪಡೆದ ಅವರು, ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ಅನೇಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಹೊರತಾಗಿ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದಾರೆ. ನನ್ನವರ ಹಾಡು, ಹೋರಾಟ, ಮೂಡಲಕ ಕೆಂಪು ಮೂಡ್ಯಾನ, ನೂರು ಹನಿಗಳು, ದನಿಯೆತ್ತಿ ಹಾಡೇನ, ಬೆಳದಿಂಗಳು ಬಿಸಿಲಾತು, ಪ್ರತಿರೂಪ, ರೆಕ್ಕೆ ಮೂಡಿದಾಗ, ಬೆಳ್ಳಿ, ನರಬಲಿ, ಬೆಳ್ಳಕ್ಕಿ ಸಾಲು ಮುಂತಾದ ಕಾವ್ಯ ಕೃತಿಗಳ ಜೊತೆಗೆ ಬೀದಿ ನಾಟಕಗಳು, ವಿಚಾರ ಸಂಪದ, ಶಾಸನಗಳು, ಪ್ರಭುತ್ವ ಮತ್ತು ಜನತೆ, ಸಮುದಾಯ ಮತ್ತು ಸಂಸ್ಕೃತಿ ಮುಂತಾದ ಪ್ರಬಂಧ-ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ. ಅವರ ಸಂಶೋಧನಾ ಕೃತಿಗಳಲ್ಲಿ ಬಸವೇಶ್ವರ ಮತ್ತು ಪುರಂದರದಾಸರು, ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವಿಗಳು ವಿಶೇಷವಾಗಿ ಗಮನಾರ್ಹವಾಗಿದ್ದು, ವಿಮರ್ಶಾ ಸಾಹಿತ್ಯದಲ್ಲಿ ಹೊಸದಿಕ್ಕು, ವಚನ ಚಳವಳಿ, ಸಾಹಿತ್ಯ ಸಂಗಾತಿ, ಜಾನಪದ, ಅನಂತಮೂರ್ತಿ ಕೃತಿಗಳು, ದಲ...
View Books
