Author Details

BS

Basavaraj Sadar

Basavaraj Sadar ಕವಿ, ಕಥೆಗಾರ ಮತ್ತು ಪ್ರಸಾರ ತಜ್ಞ ಡಾ. ಬಸವರಾಜ ಸಾದರ, 1955ರ ಜುಲೈ 20ರಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದ ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಹಾಗೂ ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಸಂಪಾದಿಸಿದರು. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯದ ಮೇಲೆ ಪಿಎಚ್.ಡಿ. ಪದವಿ ಗಳಿಸಿದ ಇವರು, ಮತ್ತೊಂದು ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಡಿಪ್ಲೋಮಾ ಇನ್ ಬಸವ ಸ್ಟಡೀಸ್‍ನ್ನೂ ಪೂರೈಸಿದರು. 1984ರಲ್ಲಿ ಅಖಿಲ ಭಾರತ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ವೃತ್ತಿ ಆರಂಭಿಸಿದ ಇವರು, ನಂತರ ಬೆಂಗಳೂರಿನ ನಿಲಯದ ಕೇಂದ್ರ ನಿರ್ದೇಶಕರಾಗಿ ಮತ್ತು ಆಕಾಶವಾಣಿಯ ದಕ್ಷಿಣ ವಲಯದ ಉಸ್ತುವಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 2015ರ ಜುಲೈನಲ್ಲಿ ನಿವೃತ್ತರಾದರು.
View Books

Top Books

HomeShop
Podcast
My Books
Cart