Author Details

BB

Basu Bevinagidad

Basu Bevinagidad, 1964ರ ಜುಲೈ 12ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ಜನಿಸಿದರು. 1988ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಇಂಗ್ಲಿಷ್‌ನಲ್ಲಿ ಎಂ.ಎ., 2011ರಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ‘ಬೇಂದ್ರೆ ನಿಸರ್ಗ ಕಾವ್ಯ’ ವಿಷಯದಲ್ಲಿ ಪಿಎಚ್.ಡಿ., 1987ರಲ್ಲಿ ಅನುವಾದ ಡಿಪ್ಲೋಮಾ ಹಾಗೂ 1993ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೋಮಾ ಪಡೆದಿದ್ದಾರೆ. 1988ರಿಂದ ಆಕಾಶವಾಣಿಯಲ್ಲಿ ಕಾರ್ಯಕ್ರಮಾಧಿಕಾರಿಯಾಗಿ ಗುಲಬುರ್ಗ, ಬಿಜಾಪುರ, ಧಾರವಾಡ ಸೇರಿದಂತೆ ಹಲವು ಕೇಂದ್ರಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಕಾರವಾರ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಸಾಹಿತ್ಯ ರಚನೆಗಳಲ್ಲಿ ಕವಿತೆ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ ಹಾಗೂ ಸಂಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ ಕನಸು, ಇಳೆಯ ಅರ್ಥ, ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಅಪರಾಜಿತೆ, ಬಯಲು ಸೀಮೆಗೆ ಬಾಗಿಲು, ನಾಳೆಯ ಸೂರ್ಯ, ಕಮಲಾದೇವಿ ಚಟ್ಟೋಪಾಧ್ಯಾಯ (ಅನುವಾದ), ಹಸಿರು ಕಾಡಿನ ಗೆಳೆಯರು, ಸ್ವಾತಂತ್ರ್ಯ ಚಳವಳಿ ಮತ್ತು ಭಾರತೀಯ ಮುಸ್ಲಿಮರು (ಅನುವಾದ), ಹಕ್ಕಿಗಮನದ ಹಾದಿ, ಕಲ್ಲು ಸಕ್ಕರೆ ಹಾಗೂ ಬೆಳಕಿನ ಹಕ್ಕಿ ಬೇಂದ್ರೆ ನಿಸರ್ಗ ಕಾವ್ಯ ಸೇರಿದಂತೆ ಹಲವಾರು ಕೃತಿಗಳು ಸೇರಿವೆ. ಇವರಿಗೆ ಬೆಂಗಳೂರು ಕ್ರ್ಲೆಸ್ಟ್ ಕಾಲೇಜಿನ ಕನ್ನಡ ಸಂಘದ ಪು...
View Books

Top Books

HomeShop
Podcast
My Books
Cart