Author Details
CB
CU Bellakki
CU Bellakki
ಮಾಧ್ಯಮವೆಂಬ ಮಾಯಾಲೋಕದಲ್ಲಿ ಪ್ರತಿದಿನ ಅನೇಕ ಸ್ವಾರಸ್ಯಕರ ಘಟನೆಗಳು, ಕಾರ್ಯಕ್ರಮಗಳು ಮೂಡಿ ಬರುತ್ತವೆ. ಆದರೆ ಅವುಗಳ ಚರ್ಚೆ, ದಾಖಲೀಕರಣ ವಿರಳ. ವಿಶೇಷವಾಗಿ ರೇಡಿಯೊ, ಟಿವಿ ಹಾಗೂ ಸಂಗೀತ ಲೋಕದ ಅವಿಸ್ಮರಣೀಯ ಕ್ಷಣಗಳು, ಸಾಧಕರು, ಯಶೋಗಾಥೆಗಳ ಬಗ್ಗೆ ಬರೆಯಬೇಕೆಂಬ ಹಂಬಲದಿಂದ, ಪ್ರಜಾವಾಣಿ ಹುಬ್ಬಳ್ಳಿ ಆವೃತ್ತಿಯ ಮೆಟ್ರೊದಲ್ಲಿ 2015–2016ರಲ್ಲಿ ಪ್ರತಿವಾರ ಸಿ. ಯು. ಬೆಳ್ಳಕ್ಕಿಯವರ ‘ಕೇಳುವ ಕೌತುಕ’ ಅಂಕಣ ಪ್ರಕಟವಾಯಿತು. ವಿವಿಧ ಕ್ಷೇತ್ರಗಳ ತಜ್ಞರು, ಕಲಾವಿದರು, ಜನರೊಂದಿಗೆ ಸಂವಾದ ನಡೆಸುವ ಕುತೂಹಲ ಅವರಿಗೆ ಇದ್ದುದನ್ನು ಆಕಾಶವಾಣಿಯ ಕೆಲಸ ಪೂರೈಸಿತು. ಈ ಅಂಕಣಗಳು ರೇಡಿಯೊ ಪ್ರಪಂಚ, ನೆನಪಾಗಿ ಉಳಿದ ಕಾರ್ಯಕ್ರಮಗಳು, ಮಾಧ್ಯಮ ಮಾಂತ್ರಿಕರು, ಸಂಗೀತ ಸಂಪದ, ಮಾಧ್ಯಮ ಸಂಕೀರ್ಣ ಎಂಬ ಐದು ವಿಭಾಗಗಳಲ್ಲಿ ವಿಂಗಡಿಸಬಹುದು. ಆರಂಭದಲ್ಲಿ ಅಳುಕು ಇದ್ದರೂ, ವಾರದಿಂದ ವಾರ ಹೊಸ ವಿಷಯಗಳನ್ನು ಬರೆಯುತ್ತ ಹೋದಂತೆ ಬರವಣಿಗೆಯ ಆಸಕ್ತಿ, ಉತ್ಸಾಹ ಅವರಿಗೆ ಹೆಚ್ಚಿತು. ಶ್ರಮಿಸಿದ ‘ಕೇಳುಗರ ಕೌತುಕ’ ಅವರಿಗೆ ಸಾರ್ಥಕವಾಯಿತು.
View Books
