Author Details

DV

D V Guruprasad

D V Guruprasad ಮೂವತ್ತೈದು ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಡಿ. ವಿ. ಗುರುಪ್ರಸಾದ್ ಅವರು ನಿಷ್ಠೆ, ದಕ್ಷತೆ, ಜನಪರತೆಗಾಗಿ ಹೆಸರುವಾಸಿಯಾಗಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯಂತ ಸೂಕ್ಷ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಪೊಲೀಸೇತರ ಇಲಾಖೆಗಳಲ್ಲೂ ತಮ್ಮ ಸೃಜನಶೀಲತೆಯ ಛಾಪು ಮೂಡಿಸಿದ ಅವರು ಲೇಖಕರಾಗಿ ಹಾಗೂ ಅಂಕಣಕಾರರಾಗಿ ಸಾರಸ್ವತ ಲೋಕದಲ್ಲೂ ಖ್ಯಾತಿ ಪಡೆದಿದ್ದಾರೆ. ಅವರ ಕೃತಿಗಳಲ್ಲಿ ಬೇರು, ಪೋಲಿಸ್ ಎನ್ಕೌಂಟರ್ ಮುಂತಾದ ಕಾದಂಬರಿಗಳು, ದೇವಸ್ಥಾನಕ್ಕೆ ಪೋಲಿಸ್ ಭೇಟಿ, Funny Side of Police Life, ಹಾಸ್ಯ ವೈಭವ ಮೊದಲಾದ ಹಾಸ್ಯ ಬರಹಗಳು, Letter in Indian Writing in English, ಪತ್ರ ಸಾಹಿತ್ಯ ಮೊದಲಾದ ವಿಮರ್ಶೆಗಳು, ಮಾರಿಯೋ ಮಿರಾಂಡ, ದೇವರಾಯದುರ್ಗ ವೆಂಕಟೇಶಮೂರ್ತಿ ಮುಂತಾದ ಕಿರು ಜೀವನಚರಿತ್ರೆಗಳು, ರಾಜೀವ ಗಾಂಧಿ ಹತ್ಯೆ – ಯಾರಿಂದ, ರಾಜೀವ ಗಾಂಧಿ ಹತ್ಯೆ – ಸತ್ಯಕ್ಕೆ ಸಂದ ಜಯ ಎಂಬ ಅನುವಾದಗಳು ಸೇರಿವೆ. ಮಾಧ್ಯಮ ಕ್ಷೇತ್ರದಲ್ಲಿ ಸರ್ಕಾರ ಮತ್ತು ಮಾಧ್ಯಮ, ಕ್ರೈಂ ರಿಪೋರ್ಟಿಂಗ್ ಮುಂತಾದ ಕೃತಿಗಳು, ಪೋಲಿಸ್ ವ್ಯವಸ್ಥೆ ಹಾಗೂ ಕಾನೂನು ಕುರಿತಾಗಿ ಹಂತಕರ ಹಿಂದೆ ಪೋಲಿಸ್ ಹೆಜ್ಜೆ, ಬಂದೂಕು – ಬದುಕು, ನಾಗರೀಕ ಹಕ್ಕು ರಕ್ಷಣ ಕಾಯಿದೆ, ಕರ್ನಾಟಕದಲ್ಲಿ ನಕ್ಸಲೀಯರು, ಆತಂಕವಾದದ ಸವಾಲು, ಭಾರತದ ಇಂದಿನ ಪೋಲಿಸ್ ವ್ಯವಸ್ಥೆ ಸೇರಿದಂತೆ 25ಕ್ಕೂ ಹೆಚ್ಚು ...
View Books

Top Books

HomeShop
Podcast
My Books
Cart