Author Details
DC
Deepika Chate
Deepika Chate
ಕತೆಗಾರ್ತಿ ದೀಪಿಕಾ ಉದಯ ಚಾಟಿ ಅವರು 1966 ಜುಲೈ 16 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿದರು. ಬಿ.ಕಾಂ. ಮತ್ತು ಎಂ.ಎ. (ಕನ್ನಡ) ಪದವೀಧರೆ ಆಗಿರುವ ಅವರು ಪರಿತ್ಯಕ್ತ ಮತ್ತು ಇತರ ಕಥೆಗಳು (2007), ಹಾಗೇ ಸುಮ್ಮನೆ (ಹಾಸ್ಯ ಸಂಕಲನ, 2010), ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು (2010) ಮುಂತಾದ ಸಣ್ಣಕಥಾ ಸಂಕಲನಗಳನ್ನು ರಚಿಸಿದ್ದಾರೆ. ಮಾಧುರಿ ಶಾನಭಾಗ ಅವರ ಮರಾಠಿ ಕಥಾಸಂಕಲನವನ್ನು ಕಾಣುತಿದೆ ನದಿಯ ಆಚೆಯ ದಂಡೆ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾವರ್ಕರ್ ಅವರ ಜೀವನವೃತ್ತಾಂತವನ್ನು ಸಹ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ AIPC ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ ಮತ್ತು ಪ್ರೊ. ಎಸ್.ಆರ್. ಜೋಗ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
View Books




