Author Details
GK
Gourish Kaikini
ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ಬ ಹಾಯ್ಸ್ಕೂಲಿನಿಂದ ಉತ್ತೀರ್ಣರಾಗಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದಾರೆ. ವಿಜ್ಞಾನದ ಮತ್ತು ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದ್ದ ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು.
View Books

