Author Details
MS
M S Sriram
ಎಂ.ಎಸ್. ಶ್ರೀರಾಮ್
ಎಂ.ಎಸ್. ಶ್ರೀರಾಮ್ ಹುಟ್ಟಿದ್ದು ೧೯೬೨ರಲ್ಲಿ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ. ಉಡುಪಿ, ಬೆಂಗಳೂರು, ಮೈಸೂರು, ಆಣಂದ್ ನಲ್ಲಿ ವ್ಯಾಸಂಗ. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನಿಂದ ಡಾಕ್ಟರೇಟ್ ಪಡೆದ ಶ್ರೀರಾಮ್ ಆನಂತರ ಆಣಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟಿನಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟಿನಲ್ಲಿ ಪ್ರೊಫೆಸರ್ ಕೆಲಸ ನಿರ್ವಹಿಸಿದ್ದಾರೆ. ಈಗ ಬೆಂಗಳೂರಿನ ಐಐಎಂನಲ್ಲಿ ಕೆಲಸ ಮಾಡುತ್ತಿದ್ದಾರೆ.
ಶ್ರೀರಾಮ್ ಅವರ ಮೊದಲ ಕಥಾ ಸಂಕಲನ `ಮಾಯಾದರ್ಪಣ`ಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ದೊರೆತಿದೆ. ಇದಲ್ಲದೇ ಅವರವರ ಸತ್ಯ ಮತ್ತು ತೇಲ್ ಮಾಲಿಶ್, ಸಲ್ಮಾನ್ ಖಾನನ ಡಿಫಿಕಲ್ಟೀಸು, ನಡೆಯಲಾರದ ದೂರ, ಹಿಡಿಯಲಾರದ ಬಸ್ಸು ಎಂಬ ಕಥಾಸಂಕಲನಗಳನ್ನೂ, ಕನಸು ಕಟ್ಟುವ ಕಾಲ, ಶನಿವಾರ ಸಂತೆ ಮತ್ತು ಅರ್ಥಾರ್ಥ ಎಂಬ ಪ್ರಬಂಧ ಸಂಕಲನಗಳನ್ನೂ ಶ್ರೀರಾಮ್ ಪ್ರಕಟಿಸಿದ್ದಾರೆ.
ಕಥನ ಕುತೂಹಲ ಅವರ ನಾಲ್ಕನೆಯ ಪ್ರಬಂಧ ಸಂಕಲನ ಹಾಗೂ ಕನ್ನಡದಲ್ಲಿ ಒಂಬತ್ತನೆಯ ಕೃತಿ.
View Books


