Author Details

MA

Mamata Arsikere

ಮಮತಾ ಅರಸೀಕೆರೆ ಬಹುಮುಖಿ ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಪ್ರತಿಭಾನ್ವಿತೆ, ಸಂಘಟನಾ ಚತುರೆ ಮತ್ತು ಸಮಾಜಮುಖಿ ಕ್ರಿಯಾಶೀಲೆ. ಆಗಸ್ಟ್ 16 ಮಮತಾ ಅವರ ಹುಟ್ಟುಹಬ್ಬ. ಅವರು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದಲ್ಲಿ. ತಂದೆ ಅನಂತರಾಮಯ್ಯ‌. ತಾಯಿ ಶಾರದಮ್ಮ. ಪದವಿ, ಟಿಸಿಎಚ್, ಬಿಎಡ್, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಂತಾದವು ಮಮತಾ ಅವರ ಶೈಕ್ಷಣಿಕ ಸಾಧನೆಗಳು. ಮಮತಾ ಅವರು ನೆಲೆ ನಿಂತಿರುವುದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ. ಮಮತಾ ಅವರು ಶಿಕ್ಷಕಿಯಾಗಿ ಸೇವೆ ಆರಂಭಿಸಿ ಮುಂದೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 'ಸಂತೆ ಸರಕು' ಕವನ ಸಂಕಲನ, ‘ಕಾಲಡಿಯ ಮಣ್ಣು' ಎಂಬ ಹಿಂದಿಯಿಂದ ಅನುವಾದಿತ ಕವನ ಸಂಕಲನ ಇವರ ಮೊದಲ ಪ್ರಕಟಿತ ಕೃತಿಗಳು. 'ನೀರ ಮೇಲಿನ ಮುಳ್ಳು' ಕವನ ಸಂಕಲನ, 'ಒಳಗೂ - ಹೊರಗು' ಲೇಖನಗಳ ಸಂಕಲನ 2022ರಲ್ಲಿ ಹೊರಬಂದಿದೆ. 'ಗಾಯಗಳಿಗೆ ವಿದಾಯ ಹೇಳಬೇಕು' ಅವರ ಮತ್ತೊಂದು ಸಂಕಲನ. ಇದಲ್ಲದೆ ಇವರ ಮಕ್ಕಳ 'ಪೇಟೆ ಮಕ್ಳು ಹಳ್ಳಿಗ್ ಬಂದ್ರು' ಎಂಬ ನಾಟಕ 'ಮಕ್ಕಳ ಮೂರು ನಾಟಕಗಳು' ಕೃತಿಯ ಭಾಗವಾಗಿದೆ. ಇವರ ಬರಹಗಳು 'ಹೆಣ್ಣೊಳನೋಟ' ಮತ್ತು ಇತರ ಅನೇಕ ಪ್ರಮುಖ ಸಂಗ್ರಹ ಪ್ರಕಟಣೆಗಳ ಭಾಗವಾಗಿದೆ. ಇವರ ಕವಿತೆ, ಕಥೆ, ಚಿಂತನ, ಅಂಕಣ ಮತ್ತು ಪ್ರವಾಸ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ನಿರಂತರ ಶೋಭಿಸುತ್ತ ಬಂದಿವೆ. ಪ್ರವಾಸಗಳಲ್ಲಿ ಅಪಾರ ಆಸಕ್ತರಾದ ಮಮ...
View Books

Top Books

HomeShop
Podcast
My Books
Cart