Author Details
NB
Narahalli Balasubrahmanya
ನರಹಳ್ಳಿ ಬಾಲಸುಬ್ರಹ್ಮಣ್ಯ
ಕನ್ನಡದಲ್ಲಿ ವಿದ್ವತ್ಪೂರ್ಣ ವಿಮರ್ಶೆಗೆ ಹೆಸರಾದವರಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರದ್ದು ಪ್ರಮುಖ ಹೆಸರು. ಸಾಹಿತ್ಯದ ಅತಿ ಸಂಕೀರ್ಣ ಸಂಗತಿಗಳನ್ನು, ಒಣವಿಚಾರ ಎನ್ನಿಸದಿರುವಂತೆ ಅತಿ ಸ್ವಾರಸ್ಯಕರವಾಗಿ ಹಾಗೂ ಸರಳ ರೀತಿಯಲ್ಲಿ ವಿಶ್ಲೇಷಿಸುವುದರಲ್ಲಿ ಅವರು ಪ್ರಸಿದ್ಧಿ ಪಡೆದಿದ್ದಾರೆ.
ಜೀವನ
ನರಹಳ್ಳಿ ಬಾಲಸುಬ್ರಮಣ್ಯ ಅವರು ಸೆಪ್ಟೆಂಬರ್ ೫, ೧೯೫೩ರಂದು ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಶಿವರಾಮಯ್ಯನವರು. ತಾಯಿ ರಾಜಲಕ್ಷಮ್ಮನವರು. ಸುಬ್ರಮಣ್ಯರ ಪ್ರಾರಂಭಿಕ ಶಾಲಾ ಓದು ನರಹಳ್ಳಿ, ಸುಂಕಾ ತೊಣ್ಣೂರು ಮತ್ತು ನಾಗಮಂಗಲಗಳಲ್ಲಿ ನೆರವೇರಿತು. ಅವರು ಪ್ರಥಮ ರ್ಯಾಂಕ್ನೊಡನೆ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕನ್ನಡ ಬಿ.ಎ. ಆನರ್ಸ್ ಪದವಿ ಹಾಗೂ ಪ್ರಥಮ ರ್ಯಾಂಕಿನಿಂದ ಕನ್ನಡ ಎಂ.ಎ. ಪದವಿ ಗಳಿಸಿ ಬಿ.ಎಂ.ಶ್ರೀ, ರಾಜರತ್ನಂ ಸ್ವರ್ಣ ಪದಕ ಪಡೆದುದೇ ಅಲ್ಲದೆ ಅತ್ಯುತ್ತಮ ವಿದ್ಯಾರ್ಥಿ ಎಂಬ ರಾಜ್ಯ ಪ್ರಶಸ್ತಿ ಹಾಗೂ ಭಾರತ ಸರಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದ ಪ್ರತಿಭಾವಂತರು. ಮುಂದೆ ಬಾಲಸುಬ್ರಮಣ್ಯರು ‘ಆಧುನಿಕ ಕಾವ್ಯದ ಹಿನ್ನೆಲೆಯಲ್ಲಿ ಕೆ.ಎಸ್.ನ. ಕಾವ್ಯ - ಒಂದು ಅಧ್ಯಯನ’ ಎಂಬ ಪ್ರೌಢಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಕೆ.ಎಸ್.ನ ಬಗ್ಗೆ ಇವರ ಮತ್ತೊಂದು ಮಹತ್ವದ ಕೃತಿಯೆಂದರೆ ಪೂರ್ಣ ಪ್ರಮಾಣದ ಸಂದರ್ಶನ ಕೃತಿಯಾದ ‘ಕೆ.ಎಸ್.ನ: ನುಡಿ...
View Books
