Author Details
PS
P Shrikrishna Bhat
ಪ್ರೊ. ಪಿ. ಶ್ರೀಕೃಷ್ಣ ಭಟ್
ಕಾಸರಗೋಡಿನ ಪುತ್ರೋಡಿ ಎಂಬ ಪುಟ್ಟಹಳ್ಳಿಯಲ್ಲಿ ಇವರು 1943 ರಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ನಂತರ ಸುರತ್ಕಲ್ಲಿನ ಗೋವಿಂದದಾಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು 1998 ರ ತನಕ ಅಲ್ಲಿಯೇ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸ್ನಾತಕೊತ್ತರ ಅಧ್ಯಯನ ಕೇಂದ್ರದ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದರು. ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರದ ಕೋ-ಅರ್ಡಿನೇಟರ್ ಆಗಿಯೂ ಸೇವೆ ಸಲ್ಲಿಸಿದರು. ವೃತ್ತಿಯಿಂದ ನಿವೃತ್ತರಾದರೂ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿ ಅಧ್ಯಯನ ನಿರತರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.
ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕೃತದ ಪ್ರಭಾವ(1989) ಅವರ ಪಿ.ಎಚ್.ಡಿ. ಅಧ್ಯಯನ ಗ್ರಂಥ, ಶಾಸ್ತ್ರ ವಿಚಾರ(2010) ಮೊದಲಾದವುಗಳು ಈ ದಿಸೆಯಲ್ಲಿ ಹೆಸರಿಸಬೇಕಾದವುಗಳು.
ಮಲಯಾಳಂನಿಂದ ಸಣ್ಣಕತೆಗಳ ಅನುವಾದ, ತುಳು, ಮಲಯಾಲಂ, ಕನ್ನಡ ಉಪಭಾಷೆಗಳ ಅಧ್ಯಯನ, ವಿವಿಧ ಗ್ರಂಥ ಹಾಗೂ ನಿಯತಕಾಲಿಕೆಗಳಲ್ಲಿ ಲೇಖನ ಪ್ರಕಟಣೆ,ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡನೆಗಳ ಮೂಲಕವೂ ಅವರು ತಮ್ಮ ಅರಿವಿನ ಅನಾವರಣ ಮಾಡುತ್ತ ಬಂದಿದ್ದಾರೆ.
View Books