ಚಿಂತೆ ಸುಟ್ಟಿತೆನ್ನ ಕಳೆದ
ಪಾಪ ಕರ್ಮವ
ಚಿಂತೆ ಧಹಿಸಿತೆನ್ನ ದುರಹಂಕಾರವ
ಚಿಂತೆ ಸೂಸಿತೊಂದು ಹೊಂಬೆಳಕ ಕಿರಣ
ಚಿಂತೆ ಬಡಿದೆಬ್ಬಿಸಿತೆನ್ನ ಆತ್ಮಸ್ಥೈರ್ಯ
ಚಿಂತೆ ತೋರಿತು ಮೂಡಣದಲಿ ನವಮಾರ್ಗ
ಚಿಂತೆಯ ಮಥನದಿಂದಾಯಿತು
ಹೊಸ ಚಿಂತನೆ
ಚಿಂತೆಯಿಂದಾಯಿತೆನ್ನ ಪುನರ್ಜನ್ಮ
ಚಿಂತೆ ಏರಿಸಲಿಲ್ಲ ಎನಗೆ ಚಿತೆಯ
ಚಿಂತೆ ಶಬ್ಧಕಾಗಲಿ ಇನ್ನು ಹೊಸ ಚಿಂತನೆಯು.
– ಉಮಾ ಭಾತಖಂಡೆ
