ನಮ್ಮ ದಿನನಿತ್ಯದ ಜೀವನ ಕ್ರಮದಲ್ಲಿ ಕೆಲವು ವಸ್ತುಗಳಿಗೆ ಪರ್ಯಾಯ ವಸ್ತು ಲಭ್ಯವಿಲ್ಲ. ಉದಾಹರಣೆಗೆ: ಉಪ್ಪು, ಇದಕ್ಕೆ ಪರ್ಯಾಯ ಪದಾರ್ಥ ಯಾವದು?
ನೀರು, ಇದಕ್ಕೂ ಪರ್ಯಾಯ ಇಲ್ಲ. ನೀರಡಿಕೆ ಆದಾಗ ನೀರಿನ ಬದಲು ಯಾವ ದ್ರವ್ಯವೂ ಬಾಯಾರಿಕೆ ತೀರಿಸುವದಿಲ್ಲ.
ಪಂಚಭೂತಗಳು ಆಕಾಶ, ಪೃಥ್ವಿ, ಅಗ್ನಿ, ವಾಯು ಜೊತೆ ಇರುವುದು ನೀರು. ನಮ್ಮ ಭೂಮಿಯ ೭೦ ಪ್ರತಿಶತ ಭಾಗವನ್ನು ನೀರು ಆವರಿಸಿದೆ, ಮನುಷ್ಯರ ದೇಹದ ೫೦ ಪ್ರತಿಶತ ಭಾಗ ನೀರಿನಿಂದ ತುಂಬಿದೆ.
ಈ ಪೀಠಿಕೆಗೆ ಕಾರಣ ನಿಮ್ಮೆಲ್ಲರಿಗೂ ಒಂದು ಕಿರುಚಿತ್ರ ತೋರಿಸಲು;
ನದಿ ಮನುಷ್ಯರಿಗೆ ಅನಾದಿಕಾಲದಿಂದಲೂ ಜೀವನದ ಪ್ರಮುಖ ಅಂಗ, ಉಪಯೋಗಿಸುವ ನೀರಿನ ಮೂಲ. ಇಂತಹ ನದಿಯನ್ನು ನಮ್ಮ ಲಾಭಕ್ಕಾಗಿ ಅಥವಾ ನಾವು ಮಾಡುವ ಪ್ರಮಾದಗಳಿಂದ ಹೇಗೆ ವಿನಾಶಕ್ಕೆ ದೂಡುತ್ತೇವೆ ಎಂಬುದು ಇದರಲ್ಲಿ ಚಿತ್ರಿಸಿದೆ. ಇದನ್ನು ನೋಡಿದ ಮೇಲೆ ಜನರು ಸರಿ, ತಪ್ಪು ತಿಳಿಯುವರೆಂದು ಆಶಿಸುತ್ತೇನೆ.
